ಹಾಡು `ಗೋವಿಂದ` ಹಾಡು
Posted date: 28 Wed, Dec 2011 ? 09:53:34 AM

 ಶ್ರೀ ಸುರೇಶ್ ಆರ್ಟ್ಸ್ ಲಾಂಛನದಲ್ಲಿ ನಿರ್ಮಾಪಕ ಸುರೇಶ್ ೨೮ ದಿವಸಗಳಲ್ಲಿ ಮಾತಿನ ಭಾಗದ ಚಿತ್ರೀಕರಣ ಮುಗಿಸಿ ೧೫ ದಿವಸಗಳಲ್ಲಿ ಕರ್ನಾಟಕದ ರಮ್ಯ ಮನೋಹರ ಸ್ಥಳಗಳಲ್ಲಿ ೪ ಹಾಡನ್ನು ಚಿತ್ರೀಕರಿಸಿದ್ದಾರೆ.

ಸಾಫ್ಟವೇರ್ ಉದ್ಯೋಗಿಯಾಗಿದ್ದುಕೊಂಡು ಹಾಸ್ಯ ಮನರಂಜನೆ ಸಿನಿಮಾಕ್ಕೆ ಪಾದಾರ್ಪಣೆ ಮಾಡುತ್ತಿರುವ ಪವನ್ ವಾಡಿಯಾರ್ ೪ ಹಾಡುಗಳ ಚಿತ್ರೀಕರಣದ ಬಗ್ಗೆ ವಿವರಣೆ ಸಲ್ಲಿಸಿದ್ದಾರೆ. ಅವರಪಕಾರ ಸುರಸುರಸುಂದರಿ.............. ಗೀತೆಯನ್ನು ಬಾದಾಮಿ ಹಾಗೂ ಪಟ್ಟದಕಲ್ಲಿನಲ್ಲಿ, ಪ್ಯಾರ್‌ಗೆ ಆಗ್ಬುಟೈತೆ................. ಹಾಡನ್ನು ಬಿಜಾಪುರದಲ್ಲಿ, ಲಕಲಕ ರಜನಿ ಸ್ಟೈಲ್............... ಹೊನ್ನಾವರದಲ್ಲಿ, ಮೊದ ಮೊದಲಿಗೆ ಹೀಗೇನೆ.................... ಹಾಡನ್ನು ಚಿಕ್ಕಮಗಳೂರಿನಲ್ಲಿ ಚಿತ್ರಿಸಿಕೊಂಡಿದ್ದಾರೆ. ಮುರಳಿ, ರಾಬರ್ಟ್ ಹಾಗೂ ಪ್ರಭು ಶ್ರೀನಿವಾಸ್ ಈ ಹಾಡುಗಳ ನೃತ್ಯ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಮತ್ತೊಂದು ಹಾಡನ್ನು ಬೆಂಗಳೂರಿನ ರಸ್ತೆಗಳಲ್ಲಿ ಚೇಸಿಂಗ್ ದೃಶ್ಯಗಳನ್ನು ಇಟ್ಟುಕೊಂಡು ಚಿತ್ರೀಕರಿಸಲಾಗುವುದು.

ಪ್ರೀತಿಯ ಹುಡುಕಾಟದಲ್ಲಿ ಗೋವಿಂದ ಗೋವಿಂದ ಎಂದು ನಾಲ್ಕು ಹುಡುಗಿಯರ ಬೆನ್ನ ಹಿಂದೆ ಬೀಳುವ ನಾಯಕ ನಟ ಕೋಮಲ್ ಕುಮಾರ್ ಕೊನೆಗೂ ಪ್ರೀತಿಯನ್ನು ಪ್ರೀತಿಯಿಂದಲೇ ಗೆದ್ದು ಬಿಡುವ ಈ ಹಾಸ್ಯಮಯ ಕೌಟುಂಬಿಕ ’ಗೋವಿಂದಾಯ ನಮಃ’ ಚಿತ್ರಕ್ಕೆ ನಿರ್ದೇಶಕ ಪವನ್ ವಾಡಿಯಾರ್ ತಮ್ಮ ಮೊದಲ ಪ್ರಯತ್ನದಲ್ಲಿ ಕತೆ, ಚಿತ್ರಕತೆ ಸಂಭಾಷಣೆ, ೨ ಹಾಡುಗಳು ಹಾಗೂ ನಿರ್ದೇಶನವನ್ನು ಒದಗಿಸಿದ್ದಾರೆ. ಇದಕ್ಕಾಗಿ ಅವರು ತಮ್ಮ ವೃತ್ತಿ ಜೀವನದಿಂದ ರಜೆ ಪಡೆದು ನಿರ್ದೇಶನಕ್ಕೆ ದುಮುಕಿದ್ದಾರೆ. ನಿರ್ಮಾಪಕ ಸುರೇಶ್ ಅವರ ಪ್ರಕಾರ ಈ ಚಿತ್ರವು ಕಾಮಿಡಿ, ಪ್ರೀತಿ, ಸಾಹಸ ಎಲ್ಲವೂ ಒಳಗೊಂಡಿದ್ದು ಸಿನಿಮಾ ಪ್ರೇಕ್ಷಕನಿಗೆ ಉತ್ತಮ ಚಿತ್ರವಾಗಲಿದೆ.

ಈ ಹಾಸ್ಯಮಯ ಚಿತ್ರಕ್ಕೆ ಕೋಮಲ್ ಕುಮಾರ್ ಜೊತೆಗೆ ನಾಯಕಿಯರಾಗಿ ಮಧುಲಿಕಾ, ರೇಖಾ, ಪಾರುಲ್ ಯಾಸ್ ಹಾಗೂ ವಿದೇಶಿ ಬೆಡಗಿ ಆನ ಬಾರ್ಬರ ಅಭಿನಯಿಸಿದ್ದಾರೆ. ವಿದೇಶಿ ಬೆಡಗಿ ಆನ ಅವರಿಂದಲೇ ಕನ್ನಡದ ಅಣಿಮುತ್ತುಗಳನ್ನು ಹೇಳಿಸಲಿದ್ದಾರೆ. ಗುರುಕಿರಣ್ ಅವರ ಸಂಗೀತವನ್ನು ಹೊಂದಿರುವ ಈ ಚಿತ್ರಕ್ಕೆ  ಸುರೇಶ್ ಬಾಬು ಅವರ ಛಾಯಾಗ್ರಹಣ ಇದೆ.
 
ತಾರಾಗಣದಲ್ಲಿ ತಬಲಾ ನಾಣಿ, ಮುಖ್ಯಮಂತ್ರಿ ಚಂದ್ರು, ಕಿರ್ಲೋಸ್ಕರ್ ಸತ್ಯ, ಹರೀಶ್ ರಾಜ್,              ವಿನಾಯಕ್ ಜೋಶಿ ಸಹ ಅಭಿನಯ ಮಾಡಿದ್ದಾರೆ.

ಜನವರಿ ೨೦೧೨ರ ಮೊದಲ ವಾರದಲ್ಲಿ ಧ್ವನಿಸುರುಳಿ ಬಿಡುಗಡೆಯಾಗಲಿದ್ದು ಈ ತಿಂಗಳ ಅಂತ್ಯದಲ್ಲಿ ಚಿತ್ರ ಬಿಡುಗಡೆ ಮಾಡಬೇಕು ಅಂತಿದ್ದಾರೆ ನಿರ್ದೇಶಕರು.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed